banner

ಶ್ರೀ ವಿದ್ಯಾಧಿರಾಜ ಗುರುವರ್ಯ , ಶ್ರೇಷ್ಠ ಪರ್ತಗಾಳಿಯ ಮಠಾಧೀಶಾ । ನಿಮ್ಮ ಪಾದವ ನಂಬಿ ಬಂದ ಭಕುತರ ಕಾರುಣ್ಯದಲಿ ಅಜ್ಞಾನವ ನೀಗಿ ಸಲಹಿ ॥ ಪ . ॥

ವೇದವ್ಯಾಸರ ಸತ್ಯ ಮತವ ಎಲ್ಲ ಏಕವಿಂಶತಿ ದುಷ್ಟ ಜನರು । ದೂಷಿಸಲು ಸಜ್ಜನರು ನಿಜದಾರಿಯೇ ಕಾಣದೆ ಕಂಗೆಡಲೂ । ಶ್ರೀಪತಿಯ ಸಿದ್ಧಾಂತ ನಿಜದಲಿ ತೋರಿ ಸಲಹಲು ಮುಖ್ಯಪ್ರಾಣನುಮಧ್ವ ಮುನಿಯೆಂದೆಸಿ ತೋರಿದ ಮುಕ್ತಿಪಥವನು ನೀವು ಬಲ್ಲಿರಿ ॥ ೧ ॥

ವೇದ ಶಾಸ್ತ್ರ ಸ್ಮೃತಿಗಳನ್ನೂ ಸೂತ್ರಭಾಷ್ಯ ಸಕಲ ವಿದ್ಯೆಗಳಲಿ । ವೀರವಿಠಲನ ಪರಮ ಪದದ ನಿತ್ಯ ಮೋದಗಳ ಜ್ಞಾನ ಮಹಿಮೆ । ಅಂದದಿಂದಲಿ ನೀವೆ ಬೋಧಿಸಿ ನಿಮ್ಮ ಪಾದವ ಪಿಡಿದ ಸಜ್ಜನದುಷ್ಟ ಮತಿ ಕಿತ್ತೊಗೆದು ಶ್ರೀಪತಿ ದಾಸ ದೀಕ್ಷೆಯ ನೀಡಿ ಸಲಹಿರಿ ॥ ೨ ॥

ಗುರುವರ ಶ್ರೀ ದ್ವಾರಕಾನಾಥರ ಕರಕಮಲ ಸಂಜಾತ । ನೊಂದೆನಾ ಬಹುಘೋರ ಭವದೀ ಬೇಡ ಅಪರಾಧಗಳೆನ್ನ ಗಣಿಸೀ । ಕರುಣದಿಂದಲಿ ಸಿರಿಯ ಅರಸನ ಪಾದಲೋಕದ ಪಥವ ತೋರಿಸಿ । ವೀರ ವಿಠಲನೇಕಾಂತ ಭಕುತರೆ ಪಾಲಿಸೀಗಲೆ ವಿಷ್ಣು ದಾಸನ ॥ ೩ ॥